Friday, December 17, 2010

ಕೋಪಿಸಿಕೊಂಡರಂತೂ ನೀ ಇನ್ನೂ ಮುದ್ದಾಗಿ ಕಾಣುವೆ


FICTION:
ಕಾಗದದ ಪ್ರೇಮಿಯಾಗದೆ ನಿನಗಾಗಿ ಕಾಯುತ್ತಿರುವೆ..
ಪ್ರೇಮ ಪತ್ರವ ನಾ ಬರೆಯಲಿಲ್ಲ ಇಂದು..
ಸಂದೇಶವ ಕಳುಹಿಸಲಿಲ್ಲಾ..
ನನಗೆ ಅಚಲವಾದ ನಂಬಿಕೆಯಿದೆ ಪ್ರೀತಿಯ ಮೇಲೆ..
ಸೂರ್ಯನ ರಶ್ಮಿಯಷ್ಟೇ ಪ್ರತಿಭೆ ನಿನ್ನಲ್ಲಿದೆ..
ರಶ್ಮಿಯ ಪ್ರಕಾಶಮಾನದಂತೆ ಮಿಂಚಿನಂತಾ ಮಾತನ್ನಾಡುವೆ..
ಕೋಪಿಸದಿರು, ಕೋಪಿಸಿಕೊಂಡರು ತುಂಬಾ ತುಂಟಕೋಪವದು..
ನೀ ಬದಲಾಗದಿರು..
ಇಷ್ಟಪಟ್ಟದ್ದು ಈ ಬಿಂಕ ಈ ಮಾತು ಈ ಪ್ರೀತಿಯ ನೋಟವನ್ನೇ ನಾ..
ಪ್ರೀತಿಯಿಂದ ಮಾತನಾಡಿದರೂ, ಹೋಗೋ loose ಎನ್ನುವೆ ನೀ..
ನಾ ಕೋಪಿಸಿಕೊಂಡರಂತೂ, ನೀ ಮಾತೇ ಬಿಡುವೆ ಎರಡು ದಿನ..
ಆ ಎರಡು ದಿನ ಮುದ್ದಾಗಿ ಕಾಣುವೆ..
ನೀನಲ್ಲದೆ ಮತ್ತಾರು ನನಗೆ..
ವರುಷ ವರುಷ ಇದ್ದ ಸ್ನೇಹಿತರು ಬಂದು ಹೋಗುವರಷ್ಟೆ..
ಈಗಷ್ಟೇ ಶುರುವಾಗಿರುವ ಈ ಪ್ರೇಮ ನನ್ನ ಹೃದಯದೊಳಗೆ ಶಾಶ್ವತವಾಗಿದೆ..
ನಾ ಸ್ವಲ್ಪ ಹುಚ್ಚುತನದ ಹುಡುಗ..
ಸ್ವಲ್ಪ ತರಲೆಯೂ ಕೂಡ..
ಪ್ರೀತಿಮಾತಿನಿಂದ ಕಿವಿಹಿಂಡಿ ಬಗ್ಗಿಸು..
ನಿನಗಾಗಿ ನಾ ಕೇಳಲಾರೆ ಎನ್ನುವೆನೆ..!?
ಹೌದೌದು,
ಅದೆಷ್ಟೋ ಬದಲಾಗಿಬಿಟ್ಟೇ ಕಣೇ..
ನಿನಗಾಗಿ ಏನು ಬೇಕಾದರು ಮಾಡುವಂತಾ ಧೈರ್ಯವಿದೆ..
ಹೇ ಹುಡುಗಿ, ಬಾಳ ಸಂಗಾತಿಯಾಗಿ ನೀ ಬಂದರೆ,
ಅದು ನನ್ನ ಅದೃಷ್ಟವೇ ಸರಿ..
ಬಾಳ ಪಯಣದಲ್ಲಿ ಸಿಕ್ಕಿರುವ ಸ್ವಾತಿ ಮುತ್ತು ನೀನು..
ಜೋಪಾನವಿರಿಸುವೆ ನಿನ್ನ..
ನೋಯಿಸಿದ್ದರೆ ಎಂದಾದರು ಕ್ಷಮಿಸು..
ಹೆಣ್ಣು ಕ್ಷಮಯಾಧರಿತ್ರಿ ಎನ್ನುವರು..
ಕೋಪಿಸಬೇಡ ನನ್ನ ಮೇಲೆ..
ನಿನ್ನ ಪ್ರೀತಿಗಾಗಿ ಸದಾ ಕಾಯುತಲಿರುವೆನು..

1 comment: