Sunday, May 22, 2011


ನೆನ್ನೇ ಮದ್ಯಾಹ್ನ 1.30ಕ್ಕೆ Menaka theatreನಲ್ಲಿ 'ಪುಟ್ಟಕ್ಕನ ಹೈವೇ' ಚಿತ್ರವನ್ನು ನೋಡಿದೆ. ತುಂಬಾ ಸುಂದರವಾಗಿ ಸಾಮಾಜಿಕ ಸಮಸ್ಯೆಯನ್ನು ವೀಕ್ಷಕರಿಗೆ ತೋರಿಸುವ ಪ್ರಯತ್ನವಾಗಿದೆ. ಹಾಗೇ ಪ್ರಶಸ್ತಿಯನ್ನೂ ತನ್ನ ಮಡಿಲಿಗೆ ಹಾಕಿಕೊಂಡದಕ್ಕೆ ನಮಗೆಲ್ಲರಿಗೂ ಸಂತೋಷವಾಗಿದೆ. ಕರ್ನಾಟಕದ ಉತ್ತಮ ನಿರ್ದೇಶಕರಲ್ಲಿ ಒಬ್ಬರಾದ ಬಿ.ಸುರೆಶ್ ರವರಿಗೆ ನಮ್ಮೆಲ್ಲಾ ಗೆಳೆಯರ ಪರವಾಗಿ ಅಭಿನಂದನೆ. :)

ಚಿತ್ರವನ್ನು ಒಂದು ಕ್ಷಣ ಬದಿಗಿಟ್ಟು, ಚಿತ್ರದ ವಾಸ್ತವೀಕತೆಯ ಬಗ್ಗೆ ಮಾತಾಡೋಣ. ಕೆಲವು ದಿನಗಳ ಹಿಂದೆ ಸುಪ್ರೀಂ ಕೊರ್ಟಿನಿಂದ ರಾಜ್ಯ ಸರ್ಕಾರಕ್ಕೆ ಛೀಮಾರಿಯಾಗಿ ಒಂದು ಸಂದೇಶ ಬಂದಿತ್ತು. NICE roadಗೆ ಭೂಸ್ವಾಧೀನಪಡಿಸಿಕೊಳ್ಳಲು ಆಗದಿದ್ದರೆ ರಾಜಿನಾಮೆ ಕೊಟ್ಟು ಬಿಡಿ. ನಿಮಗೆ ನಾಚಿಕೆಯಾಗಬೇಕು ಎಂದು. ಇದಾದ ಕೆಲವು ದಿನಗಳಲ್ಲಿ ಮುಖ್ಯಮಂತ್ರಿಯವರು ಎಷ್ಟೇ ಕಷ್ಟವಾದರು ಭೂಸ್ವಾಧೀನ ನಡೆದೇ ತೀರುತ್ತದೆ ಎಂದು ಹೇಳಿದರು. ಅತ್ತ ಉತ್ತರ ಭಾರತದಲ್ಲಿ ಪರೀಸ್ಥಿತಿ ರೈತರಿಂದ ಜಿಲ್ಲಾಧಿಕಾರಿಗೆ ಗುಂಡು ಹೊಡೆಯುವ ತನಕ ಹೋಗಿತ್ತು.
ಅಭಿವೃಧ್ದಿ ಅಂದರೆ ಏನು? ನಾವೇನೆಲ್ಲಾ ಕೆಲಸ ಮಾಡುತ್ತೇವೋ ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ಸಾಗಾಣಿಕೆ. ಉತ್ತಮ ರಸ್ತೆ ಸಂಪರ್ಕ. ಮಾನ್ಯ ಅಟಳ್ ಬಿಹಾರಿ ವಾಜಪೇಯಿಯವರು ಚತುಷ್ಪತ ರಸ್ತೆಗೆ ಹಸಿರು ನಿಶಾನೆ ತೋರಿ 10 ವರ್ಷಗಳೇ ಆಯಿತು. ನೀವು ಆ ರಸ್ತೆಯಲ್ಲಿ ಪ್ರಯಾಣ ಮಾಡಿದ್ದರೆ ಅದರ ಸುಖಮಯ ಸವಾರಿ ತಿಳಿಯುತ್ತದೆ. ಒಟ್ಟಾರೆ ಉತ್ತಮ ರಸ್ತೆ ಬೇಕು. ರಸ್ತೆ ಮಾಡಲೂ ಜಮೀನು ಬೇಕು. ಅದರೆ ಭೂಸ್ವಾಧೀನ ಮಾಡುವಾಗ ರಸ್ತೆಗಲ್ಲದೇ ಹೆಚ್ಚಿನ ಸ್ವಾಧೀನ ಅಪರಾಧವಾಗುತ್ತದೆ. ಇನ್ನು Real estate ಬಕಾಸುರರ ಕಪಿ ಮುಷ್ಟಿಗೆ ಸಿಲುಕದಂತೆ ನೊಡಿಕೊಳ್ಳುವುದು ಒಂದು ದೊಡ್ಡ ಸವಾಲೆ ಸರಿ. ಸ್ವಾಧೀನ ಮಾಡಿದ ಭೂಮಿಗೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ರೈತರಿಗೆ ಮಾರುಕಟ್ಟೆಯ ಬೆಲೆಗೆ ಹಣ ಸಂದಾಯವಾಗಬೆಕು. ಇಲ್ಲದಿದ್ದರೆ ಮತ್ತೊಂದು ಕ್ರಾಂತಿಗೆ ಭಾರತವು ಸಾಕ್ಷಿಯಾಗಬೇಕಾಗುತ್ತದೆ.
ಪ್ರತಿ ಒಂದು ವ್ಯವಹಾರವೂ ಪಾರದರ್ಶಕವಾಗಿರಬೇಕು. ಎಲ್ಲಾ ಮಾಹಿತಿಯು websiteನಲ್ಲಿ ದೊರೆಯುವಂತಾಗಬೇಕು. ಯಾರದು ಎಷ್ಟು ಜಮೀನನ್ನು ಉಪಯೋಗಿಸಲಾಗಿದೆ, ಎಷ್ಟು ಹಣ ಸಂದಾಯವಾಗಿದೆ, ಜಮೀನಿನ ಇಂದಿನ ಸ್ಥಿತಿ ಮತ್ತು ಸಂಪೂರ್ಣ ನಕ್ಷೆ. ಇವೆಲ್ಲವೂ ಖಡ್ಡಾಯವಾಗಿ ಇರಲೇ ಬೇಕು. (ಗಮನಿಸಿ ಕೇಂದ್ರ ಸರ್ಕಾರದ ಸಂಪೂರ್ಣ ಮಾಹಿತಿ ಹಕ್ಕು ಯೋಜನೆ ಇದೇ ಮಾದರಿಯದ್ದು. ಈ ಯೋಜನೆ ಬಂದಮೇಲೆ ಭ್ರಷ್ಟಾಚಾರಕ್ಕೆ ಒಂದು ಹೆಜ್ಜೆಯ ಹಿನ್ನಡೆ ಉಂಟಾಯಿತು.)
ಭೂಸ್ವಾಧೀನ ಮಾಡದೇ ಇರಲು ಸಾಧ್ಯವಿಲ್ಲಾ. ಸುಘ್ರೀವಾಙ್ಞೆ ಮಾಡಿಯಾದಾದರೂ ಸ್ವಾಧೀನ ಮಾಡಲೇಬೇಕಾಗುತ್ತದೆ. ಸಾವಿರಾರು ಜನರ ಒಳಿತಿಗಾಗಿ ಒಬ್ಬರ ಆಸೆಯ ಬಲಿ [ಆ ಆಸೆಗೆ ಬದಲಾಗಿ ಹಣದ ಸಂದಾಯ] ಕೊಡುವುದರಲ್ಲಿ ತಪ್ಪಿಲ್ಲ. ಆದರೆ ಯಾರದೋ ಲಾಭಿಗೆ, ಯಾರದೋ ಮೊಸಕ್ಕೆ ಒಳಗಾದರೆ ಅದು ಸ್ವೀಕರಿಸುವ ವಿಚಾರವಲ್ಲ. ಅದೇ ಆದದ್ದು ನಮ್ಮ ಪುಟ್ಟಕ್ಕನಿಗೆ. ಊರಿನ ಸಾಹುಕಾರ ಆಕೆಯನ್ನು ನಂಬಿಸಿ ತನ್ನ ಜಮೀನನ್ನಷ್ಟೇ ಸರಿಪಡಿಸಿಕೊಂಡ. ಕಂಡಕಂಡಲ್ಲೆಲ್ಲಾ ಲಂಚ ಕೊಡಬೇಕಾಯಿತು [ಛೀಮಾರಿ ಹಾಕಲು ಸಿಗುವ ಭಾರತದ ದುರಂತ ಕತನ]. ಮಾಧ್ಯಮದವರೂ ಕೂಡ ಏನೂ ಮಾಡಲಿಲ್ಲ. ಕಡೆಗೆ ಹಣವೂ ಸಿಗದೇ ಹೋದದ್ದು ದುರಾದೃಷ್ಟ. ಹಳ್ಳಿಯ ಬಹಳಷ್ಟು ಅವಿದ್ಯಾವಂತರ ಕತೆಯಿದು. ಆಕೆಗೆ ಮರುಭೂಮಿಯಲ್ಲಿ ಮರೀಚಿಕೆಯಾದದ್ದು ಉನ್ನತ ಅಧಿಕಾರಿ ಮತ್ತು ಹರಿಕತೆ ಹೇಳುವ ದಾಸ.

ಇನ್ನು ಆಕೆಯ ಮಗಳು..!
ಒಬ್ಬ ಪ್ರಙ್ಞಾವಂತೆಯಾದ ಯುವತಿ ವ್ಯಭಿಚಾರಕ್ಕೆ ಇಳಿಯುತ್ತಾಳೆಂದರೆ ಅದು ಸ್ವಲ್ಪ ಸಹಿಸಲಸಾಧ್ಯ. ಒಂದು ಅವಳು ಅನಾಥಳಾಗಿರಬೇಕು, ಇಲ್ಲಾ ಹಣ ಮಾಡುವ ಸುಲಭ ಮಾರ್ಗ ಹುಡುಕಿರಬೇಕು. ಆದರೂ ಇಲ್ಲಿ....
ಆಕೆಯು ಮುಗ್ದತನದಲ್ಲಿ ಬೆಳೆದ ಪುಟ್ಟ ಹುದುಗಿ. ಅವಳಲ್ಲಿ ಚಂಚಲತೆಯಿತ್ತು, ಮುದ್ದು ಮುದ್ದಾದ ಮಾತುಗಳಿದ್ದವು. ಬೆಳೆದಾದ ಮೇಲೆ ಅವಳಲ್ಲಿ ಆ ಮುಗ್ದತನ ಮಾಸಿರಲಿಲ್ಲ. ಹೊಸ ವಸ್ತುಗಳ ಆಕರ್ಷಣೆ ಮಕ್ಕಳಿಗೆ ಸಹಜ. ಯಂತ್ರಗಳ ಆಕರ್ಷಣೆ ಪಾನಿಯದ ಆಕರ್ಷಣೆ, ಸರ್ಕಾರದ ವಿರುದ್ದ ದಿಕ್ಕಾರ ಕೂಗುವಾಗಲು ತಾನು ಎಲ್ಲಿದ್ದೇನೆ ಅನ್ನುವ ವಸ್ತುಸ್ಥಿತಿ ಮರೆತು ಪ್ರಕೃತಿಯನ್ನು ನೊಡುತ್ತಾ ತನ್ನ ತಾಯಿಯನ್ನೂ ಚಂಚಲಗೊಳಿಸುತ್ತಿದಳು. ಇಂತಹ ಚಂಚಲ ಮನಸ್ಸಿನ ಹುಡುಗಿಯಲ್ಲಿ ತನ್ನ ತಾಯಿ ಬೆಂಗಳೂರಿಗೆ ಹೋಗಿ ಬರುವಷ್ಟರಲ್ಲಿ ಶಾಲೆ ಬಿಟ್ಟಿದ್ದು ಸಹಜವಾಗಿರಬಹುದು. ಹಣದ ಆಸೆ ಆಮಿಷಕ್ಕೆ ಒಳಗಾಗಿ ವ್ಯಭಿಚಾರಿಣಿಯಾಗಿ ಮಾರ್ಪಾಡಾಗಿರಬಹುದು. ಆಕೆಯನ್ನು ನೋಡಿಕೊಳ್ಳಬೇಕಾಗಿದ್ದ ಗೆಳತಿಯ ಬಹು ದೊಡ್ಡ ತಪ್ಪದು. ಬಹುಶಃ ಅನಾಥ ಹೆಣ್ಣು ಮಕ್ಕಳಿಗೆ ನಮ್ಮ ಸಮಾಜವು ಕೊಟ್ಟ ಬಳುವಳಿ. ಅತಿ ಸುಲಭವಾಗಿ ಹಣ ಸಂಪಾದನೆ ಮಾಡಲಿಕ್ಕೆ ಈ ದಾರಿ ಕಂಡಿರಲಿಕ್ಕೂ ಸಾಕು!! :(

ಪುಟ್ಟಕ್ಕನ ಬದುಕು ಗಂಡನಿಲ್ಲದೆ, ಜಮೀನಿಲ್ಲದೆ, ಕಡೆಗೆ ಮಗಳ ಬದುಕು ಕೂಡ ಕಣ್ಣೆದುರಿಗೇ ಹಾಳಾಗಿ ಹೋದದ್ದು ಒಂದು ದೊಡ್ಡ ದುರಂತ.
ಇದಕ್ಕಿರುವ ಒಂದು ದಾರಿಯೆಂದರೆ, ಸಹಾಯವಾಣಿ ತೆರೆದು ಕುಂದು ಕೊರತೆಗಳನ್ನು ನಿವಾರಿಸುವ ಧಕ್ಷ ಅಧಿಕಾರಿಗಳು ಬರಬೇಕು. ಊರ ಹಿರಿಯರು ಸಹಾಯಹಸ್ತ ಕೊಡುವ ಮನಸ್ಸು ಮಾಡುವುದು. ಒಗ್ಗಟ್ಟಾಗಿ ಸಹಾಯ ಮಾಡಬೇಕಾದ ಮನಸ್ಸು ಇರಬೇಕು. ಯಾಕೆಂದರೆ ನಾವು ಮನುಷ್ಯರು, ಪ್ರಾಣಿಗಳಲ್ಲಾ. ಮನುಷ್ಯತ್ವದಿಂದ ಬಾಳಬೇಕಾಗಿದೆ.


ಚಿತ್ರದ ಕೊನೆಯಲ್ಲಿ ತೋರಿಸಿದ ಅಭಿವೃಧ್ದಿಯ ವೇಗ ನಿಜವಾಗಲು ಸಾಧ್ಯವೆ!!?? ಎಂಬುದು ಕೆಲವರ ಅಭಿಪ್ರಾಯವಾಗಿತ್ತು. ಚಲನಚಿತ್ರಗಳಲ್ಲಿ ಅವುಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂಬ ಅರಿವು ನನಗಿದೆ. ಇನ್ನು ಎಲ್ಲರ acting ಅತ್ಯುತ್ತಮವಾಗಿ ಮೂಡಿ ಬಂಡಿದೆ. ಚಿತ್ರಗಳನ್ನು ನೋಡುವುದು ನನ್ನ ಪಾಲಿಗೆ ಶಾಲೆಯ ಅಧ್ಯಾಯನದಂತೆ. ಒಂದು ಕಣ್ಣು ಹೆಚ್ಚೇ ಇಟ್ಟು ನೋಡುತ್ತೇನೆ.
ಶ್ರುತಿಯವರ ಅಭಿನಯ ಹೊಗಳಲು ಒಂದು ಪುಟವೇ ಮೀರೀತು. ಅಳುವ ಪಾತ್ರಗಳಿಗೆ ಶ್ರುತಿ, ಉಮಾಶ್ರೀ ಮತ್ತು ತಾರಾ ನಟಿಯರು ಹೇಳಿ ಮಾಡಿಸಿದಂತೆ.
Facebook ಗೆಳೆಯರಾದ M.S.Prasadರವರ ಪುತ್ರಿಯಾದ ಕುಮಾರಿ ಪ್ರಕೃತಿಯ ಅಭಿನಯ, ಅವರ ಶ್ರಧ್ದೆಯನ್ನು ತೋರಿಸುತ್ತದೆ.
Sathish ninasamರವರ ಆರ್ಭಟವು ಇಷ್ಟವಾಯಿತು.
Achyutaರವರ ಮುಂಗೋಪಿತನದ ಮಾತುಗಳು ನೋಡುಗರಿಗೆ ಪಾತ್ರವು ಮನಸ್ಸಿನಲ್ಲಿ ಉಳಿಯುವಂತೆ ಮಾಡುತ್ತದೆ. :)

ಪುಟ್ಟಕ್ಕನ ಜಮೀನಿನ ಮೇಲಿನ ಭಾವನಾತ್ಮಕ ಒಡಣಾಟ, high way road ಆಗಲೇಬೇಕೆಂಬ ಸಾಮನ್ಯನ ಕನಸು, ಯಾವುದಕ್ಕೆ ಮನ್ನಣೆ ಕೊಡಬೇಕು...?? ಮನದಲ್ಲೇ ಜಿಙ್ಞಾಸೆಯೊಂದು ಉಳಿಯಿತು.

US countryಯಲ್ಲಿ ಪ್ರತಿಯೊಂದನ್ನೂ online entry ಮಾಡಬೇಕಾಗುತ್ತದೆ. ಹಾಗೆ ಅಲ್ಲಿನ ಸರ್ಕಾರ ಖಂಡಿತ ಸಹಾಯಕ್ಕೆ ಪ್ರಯತ್ನಿಸುತ್ತದೆ.

ಪ್ರತಿನಿತ್ಯ ಪತ್ರಿಕೆಯಲ್ಲಿ ಓದಿದ ಕೆಲವು ವಿಚಾರಗಳನ್ನು ಹಂಚಿಕೊಂಡೆ. ಅತಿರೇಕದಿಂದ ಮಾತನಾಡಿದಂತೆ ಕಂಡು ಬಂದಿದ್ದರೆ ಕ್ಷಮಿಸಿ.

ಭ್ರಷ್ಟತೆ ತುಂಬಿರುವ ಜನವಿರೋಧಿ ರಸ್ತೆಗಳ ವಿರುದ್ಧ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಹೋರಾಟದ ಕೂಗು ಪಡೆಯಲಿ. ಇದಕ್ಕೆ ಎಲ್ಲರ ಧ್ವನಿ ಖಂಡಿತಾ ಸೇರಿದೆ. :):)