Tuesday, April 6, 2010

ತಳಮಳವೀ ಅಲೆ!!

ಗೆಳೆಯರೊಬ್ಬರಂದರು ಪ್ರೀತಿಯ ನೋವು ಅಲೆಗಳಂತೆ.. ಸುಮ್ಮನ್ನಿದ್ದರು ಬಂದಾವು, ಇರದಿದ್ದರು ಬಂದಾವು.. ಅಲೆಗೆ ಸೆಡ್ಡು ಹೊಡೆದು ನಿಲ್ಲು ಮತ್ತೆ ನೋಡದೆಯೆ ಅಟ್ಟೋಡುತ್ತವೆ..
ಹೌದು, ಆದರೂ ಆ ಅಲೆಮಾರಿ ಅಲೆಗಳ ಗಮನ ಬಿಡಿ.. ಏನು ಹೇಳಲಿ, ಅಲೆಗಳ ಉಬ್ಬರಗಳು ಚಂದ್ರನ ಪ್ರೀತಿಗೆ ಸೋತು ಹೋದವು.. ಪೂರ್ಣಚಂದಿರನೊಬ್ಬನೇ ಸಾಟಿ ಅಲೆಗಳನ್ನಿಡಿಯಲು.. ಅಲೆಗಳು ಕೂಡ ಪ್ರೀತಿಯ ಬಲೆಯಲ್ಲಿ ಬಿದ್ದಾವೇ ಗೆಳೆಯ.. ಅಲೆಗಳನ್ನಿಡಿಯಲು ಮತ್ತಿನ್ನಾವ ಅಲೆ ಬಂದಾವೂ, ಹ್ಹಾಂ??!! ಉತ್ತರಿಸುವೆಯಾ.. ಪ್ರೀತಿಗೆ ಸೋಲದವರಾರು ಅಂತ ಬಲಶಾಲಿ "HULK MAN" ಕೂಡ ತನ್ನ ಪ್ರೇಯಸಿಗೆ ಕರಗಿ ನೀರಾಗಿಬಿಟ್ಟ.. ಇತಿಹಾಸ ಪುಟದಲ್ಲಿ ನೀ ಹೆಸರಿಸು ನಾಯಕ ನಾಯಕಿಯರೆಲ್ಲರೂ ಸೋತು ಹೋದರು.. ಅಲ್ಲೊಬ್ಬಳು ಸುಂದರಿ, ಆಕೆಯ ಕಂಗಳಲ್ಲಿದ್ದ ಮಿಂಚು ನನ್ನ ಕಣ್ಣೊಳಗೆ ಸಂಚಾರವಾಯಿತು, ಅದು ನೀ ಹೇಳಿದ ನೋವಿನ ಅಲೆಯಾಗಿರದೆ ಮಗುವಿನ ಮುಗ್ದತೆಯಂತೆ ಸ್ಪರ್ಷಿಸಿತು.. ಅಗೋ ನೋಡು ಇಂದು ಪೌರ್ಣಿಮೆ ಇರಬಹುದು.. ಬರಸದಿಂದ ಬೀಗುತ್ತಿವೆ ಅಲೆಗಳು.. ತಂಗಾಳಿಯು ಮನಸ್ಸನ್ನು ಮಗುವಾಗಿಸಿದೆ... ಇರಲಲ್ಲವೇ ಸದಾ ಮಗುವಿನಂತೆ..

No comments:

Post a Comment