Tuesday, January 4, 2011

ಕೋಪವೇ ದುರ್ಬಲ!!

ತಾವು ಎಷ್ಟೇ ಪ್ರೀತಿಸಿದರೂ ಒಬ್ಬ ವ್ಯಕ್ತಿಯ ಬಗ್ಗೆ ಕೆಲವು ನಕಾರಾತ್ಮಕ ವಿಷಯಗಳು ಮನಸ್ಸಿನಲ್ಲಿರುತ್ತದೆ. ಅದು ಅವರೇ ಸೃಷ್ಟಿಸಿದ್ದಾಗಬಹುದು ಅಥವಾ ಯಾವುದೋ ಘಟನೆಯಿಂದ ಬಂದಿರಬಹುದು. ಕೋಪಬಂದಾಗ ಅಲ್ಲಿಯವರೆಗೂ ಅವರ ಮನಸ್ಸಿನಲ್ಲಿ ಬಚ್ಚಿಟ್ಟುಕೊಂಡಿದ್ದ ಆ ಗೊಂದಲದ ಗುಚ್ಛ ಮಾತಾಗಿ ಬರುತ್ತದೆ. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎನ್ನುತ್ತಾರೆ. ಒಂದೇ ಒಂದು ಮಾತು ಸಾಕು ಸಂಬಂಧಗಳನ್ನು ಹೊಸಕಿ ಹಾಕಲು. ಎಷ್ಟೇ ತೇಪೇ ಹಾಕಿದರೂ, ಎಷ್ಟೇ ಕ್ಷಮಾಪಣೆ ಕೇಳಿದರೂ, ಆ ಮೊದಲ ಸಲದ ಮಾತು ಮನಸ್ಸಿನಿಂದ ಅಳಿಸಲಾಗದು. ಅದಕ್ಕಾಗಿಯೇ ಮಾತಿನ ಮೇಲೆ ನಿಗಾ ಇರಲಿ. ಉತ್ತಮ ನಾಯಕನಾಗಲು ಬೇಕಾಗುವ ಮೊದಲ ಗುಣವಿದು.

ಹಿಂದೇ ನಿಮಗೆ ಯಾರೊಟ್ಟಿಗೆ ಸಂಬಂಧಗಳು ಕಹಿಯಾಯಿತೋ ಅಥವಾ ನೀವು ಮುಜುಗರಕ್ಕೊಳಗಾದೆರೋ ಅವರನ್ನು ಸಂಪೂರ್ಣವಾಗಿ ಆಚೆ ಹಾಕುವುದು ಉತ್ತಮ. ನಕಾರಾತ್ಮಕ ಭಾವನೆ ತರುವ ಹಾಗೂ ಕಾಲೆಳೆಯುವ ಜನರ ಸ್ನೇಹ ಬೇಕಾಗಿಲ್ಲ. ಇದ್ದರೇ ಪರಸ್ಪರ ಪ್ರೀತಿ ವಿಶ್ವಾಸ ಗೌರವದಿಂದ ಬದುಕೋಣ. ಇವು ಕೊಡಲು ಸಾಧ್ಯವಿಲ್ಲದ್ದಿದ್ದರೆ ಅವರವರ ಜೀವನ ಅವರದ್ದಾಗುತ್ತದೆ ಅಷ್ಟೇ.
ಪ್ರಪಂಚ ವಿಶಾಲವಾಗಿದೆ. ಜೀವನವಿದೆ. ಇನ್ನಷ್ಟು ವಿಶಾಲ ಮನೋಭಾವದ ಜನರನ್ನು ಭೇಟಿ ಮಾಡುವ ಅವಕಾಶವೂ ಇದೆ. :)

No comments:

Post a Comment