ಇಂದಿಗೆ ನನ್ನ ಬ್ಲಾಗ್ ಒಂದು ವರ್ಷ ಪೂರೈಸಿದೆ. ಹಾಗಾಗಿ ಒಂದೆರಡು ಆಪ್ತ ಮಾತುಗಳ ಜೊತೆ...
ಆಧುನಿಕತೆಯಿಂದ ಮನುಷ್ಯ ತನ್ನತನವನ್ನು ತೋರಿಸಲು ಇರುವ ಒಂದು ಅಧ್ಬುತ ದಾರಿಯಿದು.
ಈ ಬ್ಲಾಗ್ ಬರೆಯಲು ಕಾರಣ ಯಾರದೋ ಮೇಲಿನ ಅಸಮಾಧಾನ. ಅದು ನಂತರ ನನ್ನತನ ಕಂಡುಕೊಳ್ಳುವ ಹವ್ಯಾಸವಾಯಿತು.
ನನ್ನ ಬ್ಲಾಗ್ ಅವರಿಗೆ ತಕ್ಕಮಟ್ಟದ ಉತ್ತರ ಕೊಟ್ಟಿದೆ. ನನ್ನಲ್ಲಿ ನಾನೇನು ಅನ್ನುವುದನ್ನು ಅರ್ಥಮಾಡಿಕೊಳ್ಳುವುದಕ್ಕೂ ಒಂದು ವೇದಿಕೆಯಾಯಿತು.
ಮುಂದೊಂದು ದಿನ ಮತ್ತೇ ಮೊದಲಿಂದ ಓದುವಾಗ ಒಂದು ಮುಗುಳ್ನಗೆ ಬಂದರೇ ಅಷ್ಟೇ ಸಾಕು.
ಮುಗ್ದನಾದ ಒಬ್ಬ ಚೋರ ನನ್ನೊಳಗಿದ್ದಾನೆ ಅನ್ನಿಸಿತು ಅವನಿಗೂ ಮಾತನಾಡಲು ಅವಕಾಶ ಕೊಟ್ಟೆ, ಚಿಟಪಟ ಚಿಟಪಟ ಅಂತ ಸುರುಸುರುಬತ್ತಿ ಹೊಡೆದಂತೆ ನನ್ನಲಿರುವ ಪುಟ್ಟ ಹುಡುಗನ ಜೊತೆ ಸಂಭ್ರಮಿಸಿದೆ, Updates ಹಾಕಿದೇ, ನೀವೂ ಖುಷೀ ಪಟ್ಟಿರೀ ಎಂದು ಭಾವಿಸುತ್ತೇನೆ.
ಸಾಧನೆಯ ಮೆಟ್ಟಿಲು ಏರಲು ತಹತಹಿಸೂತ್ತಿರುವ ಒಂದು ಮನಸ್ಸಿಗೆ ಅಲ್ಲಲ್ಲಿ ಸಿಕ್ಕ ಗರಿಕೆ ಹುಲ್ಲಿನಂತಾ ಸಂತೋಷವನ್ನು ನನಗೆ ತಕ್ಕದಾದ ಮಟ್ಟದಲ್ಲೀ ಹಂಚಿಕೊಂಡದ್ದು ಇಷ್ಟು ದಿನ.
ನಾನು ಸ್ನೇಹಿತರನ್ನು ಆತ್ಮೀಯವಾಗಿ ಕಾಣಲು ಇಷ್ಟ ಪಡುತ್ತೇನೆ.
Then ಯಾರದಾದರೂ ಕನ್ನಡ ಬರವಣಿಗೆ ಕಂಡರಂತು ಆನಂದ.
ಬಿ.ಸುರೇಶ್ ರವರು ನನಗೆ FB ಅಲ್ಲಿ ಕನ್ನಡ Updateಗಳಿಂದ ತುಂಬಾ ಇಷ್ಟವಾದರು.
ORKUT, FB ನನ್ನ ಜೀವನದಲ್ಲಿ ನೋಡಿದ ಅಧ್ಬುತಗಳು. 5 ವರ್ಷ ಹಿಂದಿನ ಜೀವನಕ್ಕೂ ಈಗಲೂ ವ್ಯತ್ಯಾಸ ಇದೆ. ಇಂದು ಗೊತ್ತಿರುವವರೇ 1000 ಮೀರುತ್ತದೆ.
ಒಬ್ಬ Doctor ಆಗಲು ಹೊರಟ ಹುಡುಗನಿಗೆ MBBS ಜೀವನ ಸುಂದರ ಅಧ್ಬುತ. ನಾನು ಉತ್ತಮ ಡಾಕ್ಟರ್ ಆಗುವುದು ಹೇಗೆಂಬ ಸ್ಪಷ್ಟ ಕಲ್ಪನೆ ನನಗಿದೆ.
ನಾನು ಜೀವನ ನೋಡುವ ರೀತಿಯೇ ಬೇರೇ.. ಇಲ್ಲಿ ಬಣ್ಣಗಳಿವೆ ಕನಸುಗಳಿವೆ ಹುಡುಗಾಟವಿದೆ ಚಂಚಲತೆ ಅಪಾರವಾಗಿದೆ ಮುಗ್ದತೆಯಿದೆ, ಬುದ್ದಿವಂತಿಕೆಯಿದೆ, ನನ್ನ ಜೀವನ ಬೇರೊಂದು ಲೋಕವೆ ಆಗಿದೆ. ನಾನು ಸ್ನೇಹಜೀವಿ, ಹಸನ್ಮುಖಿಯಾಗಿರಲು ಇಷ್ಟಪಡುವೆ.




No comments:
Post a Comment