ಚಲಿಸುವ ಮೋಡಗಳೇ, ನಿಂತು ಕೊಂಚ ನೆನಸೆರಾ ಧರೆಯ..
ಹಕ್ಕಿ ಪಿಕ್ಕಿಗಳ ಕಲರವ ನಾದ, ನವಿಲಿನ ನಾಟ್ಯ ಕಾದಿ ಕರೆದಿದೆ ನಿನ್ನಯ...
ರೈತಾಪಿ ಜನಗಳ ಜೀವನಾಡಿ ನೀನೆ..
ಬತ್ತಿದೆ ಬತ್ತ ಸೋತಿದೆ ರಾಗಿ ಸುರಿಯೇ ನೀನು ಸೋನೆ...
ಬರದ ಬೆಂಗಾಡಿನಲ್ಲಿ ಅಲೆವ ಮೂಕ ಮನಸುಗಳು..
ಕಾಲಿ ಕೊಡದ ಬಾಗಿದ ಗೂನದಿ ಅಲೆದಾಡುವ ಹೆಂಗಳು...
ಅಲ್ಲೊಂದು ಆಕಳು, ಇಲ್ಲೊಂದು ಕರು ಕೇಳುವವರಾರು ಕೂಗಿನ ಆರ್ತನಾದವೆ..
ನೋಡುವವರ ಕಣ್ಣಲ್ಲಿ ಕಣ್ಣೀರಿಗೂ ಬರವೆ...
ನೀನಲ್ಲವೆ ಶಕ್ತಿಯ ಬಿಂದು ನಮ್ಮೆಲ್ಲರ ಸಿಂಚನ..
ಬೇಡುವೆವು ನಿನ್ನ ಕೈ ಮುಗಿದು ಹನಿಯಾರಿದೆ ಭುವನ...
ನಿಲ್ಲು,,
ಮನದ, ಬನದ, ನದ, ಕಾನನದ ನಲಿವಾಗಲು.....
Wrote in 2nd yr MBBS..
Subscribe to:
Post Comments (Atom)
No comments:
Post a Comment