ನಾನು ಭ್ರಷ್ಟಾಚಾರ ಒಪ್ಪುವುದಿಲ್ಲ. ನಾನಾ ಪರಿಸ್ಥಿಯನ್ನು ಊಹಿಸಬಲ್ಲೆ. ಮನಸ್ಸೆಂಬುದು ಮರ್ಕಟ ನೋಡಿ. ದುಡ್ಡಿಗಾಗಿ ಆಸೆ ಪಡದವರಾರು. ಅದಕ್ಕಾಗಿಯೇ ಆ ಬಲೆಗೆ ಬೀಳಬಾರದೆಂದು ಹಟಕ್ಕೆ ಬಿದ್ದು ಈಗಿನಿಂದಲೇ ಅದರ ಸ್ಪಷ್ಟ ಕಲ್ಪನೆ ಬೆಳೆಸಿಕೊಂಡಿರುವೆನು. ಒಳ್ಳೆಯ ದಾರಿಯಲ್ಲಿ ದುಡ್ಡು ಸಂಪಾದಿಸಲು ಬಹಳ ದಾರಿಗಳಿವೆ.
ರಾಜಕೀಯಕ್ಕೆ ಹೋಗುವ ಇಚ್ಚೆಯಿಲ್ಲ ಆದರೆ ರಾಜಕಾರಣಿಯ ಒಂದು ಪವಿತ್ರ ಸ್ಥಾನದಲ್ಲಿ ನಿಂತು ಯೋಚಿಸಬಹುದು. 2G ಹಗರಣದ ಬಗ್ಗೆ ಮನಸ್ಸು ವಿಚಲಿತವಾಯಿತು. 175ಸಾವಿರ ಕೊಟಿ ರೂ ಅಂದರೇ ಸುಮ್ಮನೆಯೇ. ಒಬ್ಬ ವ್ಯಕ್ತಿ ಇಷ್ಟು ದೊಡ್ಡ ಹಣವನ್ನು ಹೇಗೆ ಸಂಬಾಲಿಸಬಲ್ಲ. ಕೆಲವೇ ಕೆಲವು Sign ಹಾಕುವುದರಲ್ಲಿಯೇ ಕೋಟಿ ಕೋಟಿ ವ್ಯವಹಾರ ನಡೆದು ಹೋಗುತ್ತದೆ. ಆ ಕುರ್ಚಿಯ ಸ್ಥಾನಮಾನವೂ ಹಾಗೆಯೇ ಬಿಡಿ. ಮಧ್ಯದಲ್ಲಿ ಬಡವಾದದ್ದು ಮನಮೋಹನ್ ಸಿಂಗ್.. ಕಾಂಗ್ರೆಸ್ ಸರ್ಕಾರ ಒಂದು ರೀತಿಯಲ್ಲಿ ಉತ್ತಮ ಆಡಳಿತ ನೀಡಿದೆ. ಆದರೆ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧೀ ಇಬ್ಬರನ್ನೇ ನೋಡಿ ಹಾಗೆ ಹೇಳುವ ಹಾಗಿಲ್ಲ. ಪಕ್ಕ ದೊಡ್ಡದಾದಂತೆ ಎಲ್ಲರನ್ನು ಎಲ್ಲವನ್ನು ಇತಿ ಮಿತಿಗೊಳಿಸುವುದು ಸವಾಲಿನ ಕೆಲಸ. ಪ್ರತಿಯೊಬ್ಬನು ಮನಸ್ಸಾಕ್ಷಿ ಹೊಂದಿ ಬದುಕಿದರೆ ಬಹುಷಃ ಎಲ್ಲವೂ ಸರಿ ಹೋಗಬಹುದು.
ರೆಡ್ಡಿ ಸಹೋದರರನ್ನು ಕಂಡರೆ ಅಸಮಾಧಾನವಿದೆ. ಅಗೆದು ಬಗೆದು 2003-2010ರವರೆಗೆ 22500 ಕೋಟಿ rs ದೋಚಿಹಾಕಿದರು. ಇವರೆಂತಾ ದೇಶಪ್ರೇಮ ಇರುವವರು? ಮಾಡುವುದು ಅನಾಚಾರ ಮನೆ ಮುಂದೆ ಬೃಂದಾವನ ಅಂತ ಸಾರ್ವಜನಿಕವಾಗಿ ಪ್ರಮಾಣಿಸಿ ಹೇಳುತ್ತಾರೆ. ಒಬ್ಬ ವ್ಯಕ್ತಿಯ ಬಳಿ ಇಷ್ಟೊಂದು ಹಣ ಯಾವ ಪುರುಷಾರ್ತಕ್ಕೆ? ಇವೆಲ್ಲವೂ ತಿಳಿದಿದ್ದರೆ ಬಹುಷಃ ದೇಶದ ಸ್ವಾತಂತ್ರ್ಯ ತಂದ ನಾಯಕರು ಪ್ರತಿಯೊಬ್ಬರ ಆಸ್ತಿಗೂ ಇತಿ ಮಿತಿ ಮಾಡುತ್ತಿದ್ದರೇನೋ. ಒಬ್ಬ ಮನುಷ್ಯ ಸುಖವಾಗಿ ಬದುಕಲು ಎಷ್ಟು ಹಣ ಬೇಕಾದೀತು? ಇದರ ಮೇಲೆ ಯಾರೇ ಏನೇ ಆಸ್ತಿ ಮಾಡಿದರೂ ಮುಟ್ಟುಗೋಲು ಹಾಕಿಕೊಳ್ಳುವ ಕಾನೂನು ಬರಬೇಕು. ಇದ್ದಾರೆ ನಮ್ಮ ದೇಶದಲ್ಲೇ ಕೋಟಿ ಕೋಟಿ ಆಸ್ತಿಗಳುಳ್ಳ ಕಳ್ಳರು. ವಿದೇಶಿ ಬ್ಯಾಂಕುಗಳಲ್ಲಿ 300ಲಕ್ಷ ಕೋಟಿ ಹಣವಿದೆ. ಅದು ಸರ್ಕಾರದ ಪಾಲಾಗಬೇಕು. ಆ ಮೂಲಕ ಎಲ್ಲಾ ಜನರಗೆ ತಲುಪಬೇಕು. ಭಾರತ ಬಡದೇಶವಲ್ಲ. ಇಲ್ಲಿರುವ ಬಹುಪಾಲು ಜನ ಬಡವರು.
SUPER ಚಿತ್ರ ಕೂಡ ಮನಸ್ಸಿನ ಯೋಚನಾ ಲಹರಿಗೆ ಒಂದು ಪಾಲನ್ನು ಸೇರಿಸಿತು.
ಆದರೂ ಒಂದು ನಿಜ. ಈ ದುರಾಸೆ ಮನುಷ್ಯ ಸೃಷ್ಟಿಸಿದ್ದೇ ಅಥವಾ Nature ಇಂದ ಬಂದದ್ದೋ. ಸುತ್ತಲ ಪ್ರಾಣಿಗಳನ್ನು ಗಮನಿಸಿದೆ. ಅವುಗಳಲ್ಲೂ ಮದ, ಕೋಪ, ತಾಪ, ಇದು ನನ್ನದು, ನನ್ನ ಜಾಗ, ಈ ಜೀವಿ ನನಗೆ ಸೇರಿದ್ದು, ಎಂಬುದು ಅಲ್ಲಿಯೂ ಇದೆ. ಹಾಗಾದರೇ ಇಂದು ಮನುಷ್ಯ ಮಾಡುತ್ತಿರುವ ತಾರತಮ್ಯತೆ, ಭ್ರಷ್ಟಾಚಾರ ಅದು ಪ್ರಕೃತಿಯಿಂದ ಬಂದದ್ದೇ...!!?
Survival of the fittest.
ಮನುಷ್ಯನು ಹೀಗೆ ಇರಬಹುದು. ದರ್ಪ, ಅಹಂಕಾರ, ನನ್ನದು, ನನ್ನತನದ ಜೊತೆ ಅವನ ಬುದ್ದಿವಂತಿಕೆಯೂ ಸೇರಿದೆ. ಬೇರೆ ಯಾವ ಪ್ರಾಣಿಗಳಲ್ಲೂ ಸ್ವಂತ ಯೋಚನೆಯ ಶಕ್ತಿಯಿಲ್ಲ. ಈ ಕಾರಣದಿಂದ ಮನುಷ್ಯ Different ಆಗುತ್ತಾನೆ. ಹಾಗಾದರೆ ಅದರರ್ಥ ಅವನು Nature ಅನ್ನು ತನ್ನ Control ಅಲ್ಲೀ ಇಡಬಹುದು. ಅಂದರೆ ತಾನು ಏನು ಮಾಡತ್ತೇನೆ ಎಂಬ ಸ್ಪಷ್ಟ ಕಲ್ಪನೆ ಆತನಿಗಿದೆ. Good. ಹಾಗಾದರೇ ಆ ಕಲ್ಪನೆಯನ್ನು Education ಮೂಲಕ ಸರಿದಾರಿಗೆ ತರಲು ಸಾಧ್ಯವಿದೆ. Media influence ಹೆಚ್ಚಿರುವ ಈಗಿನ ಕಾಲದಲ್ಲಿ SUPER ತರಹದ ಚಿತ್ರಗಳು ತನ್ನ ಪ್ರಭಾವ ಬೀರಲು ಖಂಡಿತಾ ಸಾಧ್ಯವಾಗುತ್ತದೆ.
No comments:
Post a Comment