Thursday, August 19, 2010

ಆ ಪಾಪದ ಕೂಸೆ ಭಿಕ್ಷಾಟನೆ :(


ಈಗ ನಡೆದಿರುವ ಘಟನೆ ಸರ್ಕಾರ, ಜನರೂ ತಲೆ ತಗ್ಗಿಸುವಂತಹದ್ದು.. ನಾಗರೀಕ ಸಮಾಜ ಕಟ್ಟಿದ ಮೇಲೆ ಎಲ್ಲರಿಗೂ ಬದುಕಲು ಹಕ್ಕಿದೆ.. ಆದಿ ಮಾನವರೇ ಎಷ್ಟೋ ಚೆನ್ನಾಗಿದ್ದರೆನಿಸುತ್ತದೆ.. ಯಾರ ಜಂಜಾಟವೂ ಇಲ್ಲದೆ ಕಾಡಿನಲ್ಲಿ ಸಿಕ್ಕದ್ದೆಲ್ಲಾ ಸವಿಯುತ್ತಿದ್ದರೇನೋ..?! ಈಗ ಹಸಿದವನು ನೀರೂ ಕುಡಿಯಲು ದೊಣ್ಣೆನಾಯ್ಕನ ಅಪ್ಪಣೆ ಬೇಕು.. ನಾಗರೀಕತೆ ಎಲ್ಲವನ್ನ ಬಗೆದು, ಹಂಚಿಕೊಂಡು, ಇಲ್ಲದವರಿಗೆ ಬರಿಗೈ ಮಾಡಿ ಕೂರಿಸಿದೆ.. ಆ ಪಾಪದ ಕೂಸೆ ಭಿಕ್ಷಾಟನೆ.. :(
ಇಲ್ಲಿ ಒಂದು ಅಂಶ ಪ್ರಸ್ತಾಪಿಸಬೇಕು.. ಭಿಕ್ಷುಕರ ಹುಟ್ಟಿಗೆ ಕಾರಣವೇನು.. ನಾನು ಓದಿದ ಪ್ರಕಾರ ಸ್ವಾತಂತ್ರ್ಯದ ಸಮಯದಲ್ಲ 90% ಜನ ಅವಿದ್ಯಾವಂತರೂ ಮತ್ತು ಗ್ರಾಮೀಣ ಪ್ರದೇಶದಲ್ಲಿ ಇದ್ದವರು. ಅಲ್ಲಿಂದ ಇಲ್ಲಿಯವರೆಗೆ ಕಾಲ ಬದಲಾಗಿದೆ.. ಅಂದು ಇಲ್ಲದವರು ಇಂದು ಶ್ರೀಮಂತರಾಗಿದ್ದಾರೆ.. ಆದರೆ ಈಗ ಭಿಕ್ಷೆ ಬೇಡುತ್ತಿರುವವರ ಪೂರ್ವಿಕರು ಏನು ಮಾಡುತ್ತಿದರು..? ಉತ್ತರ ಹಲವು.. ಒಂದು ಅವರು ಸಿಕ್ಕ ಅವಕಾಶಗಳುನ್ನು ಉಪಯೋಗಿಸದೆ ಹಿಂದುಳಿದಿರಬಹುದು ಅಥವಾ ಯಾರೋ ಅನಾಥರಾಗಿರಬಹುದು ಅಥವಾ ಯಾರಿಂದಲೋ ಮೋಸಕ್ಕೆ ಒಳಗಾಗಿರಬಹುದು ಅಥವಾ ಅವರವರ ಹಣೆಬರಹದಿಂದ ಹಣ ಹಾಳು ಮಾಡಿರಬಹುದು.. ಇದಕ್ಕೆ ಹಿಂದಿನ ಸರ್ಕಾರ ಖಂಡಿತ ಹೊಣೆಯಾಗುವುದಿಲ್ಲ.. ಹಣ, ಜಾಗ ಎಲ್ಲವನ್ನು ಎಲ್ಲರೂ ಮಾಡುವಾಗ ಇವರೇಕೆ ಮಾಡಲಿಲ್ಲಾ..? ಭಿಕ್ಷಾಟಣೆಗೆ ಅವರವರೇ ಕಾರಣರಾಗುತ್ತಾರೆ, ಆದರೇ ಸರ್ಕರ ಅವರ ಬೆನ್ನೆಲುಬಾಗಬೇಕು.. ಅಮೇರಿಕಾದಲ್ಲಿ ಇರುವುದೇ ಆ ಬೆನ್ನೆಲುಬು.. ನಾಗರೀಕ ಸಮಾಜ ಮಾಡಿದ ಮೇಲೆ ಪ್ರತಿಯೊಬ್ಬರ ಏಳಿಗೆ ಗಮನಿಸಬೇಕು.. ಇಲ್ಲದಿದ್ದರೆ ಮೇಲೆ ಹೇಳಿದ ಹಾಗೆ ಅದು ನಾಗರೀಕತೆಯ ತಪ್ಪಾಗುತ್ತದೆ.. ಸರ್ಕಾರ ಇವನ್ನೆಲ್ಲಾ ಗಮನಿಸಲು ಇಚ್ಚಾಶಕ್ತಿಯು ಬೇಕು ಹಾಗೇ ಜನಸಂಖ್ಯಯೂ ಕಡಿಮೆ ಇರಬೇಕು.. 125ಕೋಟೀ!!
ಯಾರನ್ ನೋಡೋದು, ಯಾರನ್ ಬಿಡೋದ್? :(

No comments:

Post a Comment