"PERFECTIONIST" ಎಂಬ 13 ಅಕ್ಷರಗಳು ನಿದ್ದೆ ಕೆಡಿಸಿದ ದಿನಗಳಿವು.. PERFECT ಆಗಲೇ ಬೇಕೆಂಬ ಹಂಬಲದಿಂದ ಹುತ್ತಗಳನ್ನು ಕೆದಕಿದ್ದು ಆಯಿತು, ಘಟಸರ್ಪಗಳೇನು ಕಾಣಲಿಲ್ಲವಾದರು, ನಿಧಿಯನ್ನಂತು ಮುಟ್ಟಲಿಲ್ಲ, ಪ್ರಾಯಶಃ ಸಿಗಲಿಲ್ಲ.. ಬರೆದ ಅನೇಕಾನೇಕ Internals Exams ಹೇಳಹೆಸರಿಲ್ಲದಂತೆ ಕೊಚ್ಚಿಕೊಂಡು ಹೋಗುವಂತಹ ಅಪಾಯವನ್ನು ತಂದುಕೊಟ್ಟವು.. Medical books ಹಿಡಿದು ಒದ್ದಾಡಿದೆ.. ಅಂದು ನಾ ಎಲ್ಲದರಲ್ಲು Perfect ಆಗಬಯಸಿದೆ.. ಆ ದಾರಿಯಲ್ಲಿ FACEBOOK, ORKUT, BLOGs ಎಂಬ ಮಾಯಾಂಗನೆಯ ಶಿಲ್ಪಿಗಳು ಕಂಡರು.. ನನ್ನನೆ ನಾ ಕಾಣುವಂತ ಪ್ರತಿಬಿಂಬವು ಕಾಣಿಸಿ, ನಾ ತಪ್ಪೇ ಮಾಡದ ಹಾಗೆ ಸುಂದರ ಶಿಲ್ಪವಾಗಿ ಮಾರ್ಪಡು ಮಾಡುತ್ತಾ, Perfectness ಎಂಬ ನಿಧಿಯ ಬೆನ್ನಟಿಸಿದವು.. ನನಗಂತೂ ನಂಬಿಕೆಯಿದೆ.. ಅಂದೊಂದು ದಿನ ನನ್ನನೇ ನಾ ಕನ್ನಡಿಯಲಿ ನೋಡುವೆ, ಮೈ ಕೈ ತುಂಬಾ ಹುಚ್ಚು ಹಿಡಿದವನಂತೆ ಕುಣಿದಾಡುವೆ, ಸುಂದರ ವನವೆಂಬ ಈ ಪ್ರಪಂಚಕ್ಕೆ ಬೊಬ್ಬೆಯೊಡೆದು ಹೇಳುವೆ, ನಾ Perfect ಆಗಿರುವೆ ಆಲಂಗಿಸಿ ಬನ್ನಿ ಎಂದು..
Hmmmm, Perfect ಎಂಬ ಸುಂದರಾಂಗನ್ನನ್ನು ಬೆನ್ನು ಬಿಡದ ಬೇತಾಳನಂತೆ ಬೆನ್ನಟ್ಟಿರುವುದಂತು ಸತ್ಯ.. ಎಲ್ಲದಕ್ಕು ಕಾಲವೇ ಹೇಳಬೇಕು.. MEDICAL ಜೀವನ ಮತ್ತು ಸಂಘರ್ಷದ ಬದುಕಿನ Competition ಎರಡು ನನ್ನನ್ನು ಹಣ್ಣುಗಾಯಿ ನೀರುಗಾಯಿ ಮಾಡೀ, 6ಕ್ಕೇರದ 3ಕ್ಕಿಳಿಯದ ಎಡಬಿಡಂಗಿಯಾಗಿ ಮಾಡಿದೆ.. ಕಂಡ ಕನಸು ಬೆಟ್ಟದಷ್ಟು.. Perfection ಎಂಬ ಕನಸನ್ನು ಒಂದು ಕೈಯಲ್ಲಿ, ಮಾಡಬೇಕಿರುವ ಕನಸುಗಳನ್ನು ಮತ್ತೊಂದು ಕೈಯಲ್ಲಿ ಹಿಡಿದು ಬೆಟ್ಟದಂತಿರುವ DOCTOR ಎಂಬ ಜೀವನದ ಕೊಂಡಿಯನ್ನು ಹಿಡಿದು ಹೊರಟಿರುವೆ..
ಕೊಂಚ ಗಾಬರಿಯಂತು ಆಗಿದೆ, ಅನುಭವವು ಎಲ್ಲವನ್ನು ಸರೀ ಮಾಡುತ್ತದೆ, ಅಲ್ಲವಾ....?
Subscribe to:
Post Comments (Atom)
No comments:
Post a Comment