Saturday, March 27, 2010

ಹೊತ್ತಿಗೆ..

Written in 2008.. Hope u like this 1.. Check out..

ಙ್ಞಾನದ ತುಡಿತಕ್ಕೆ ಮಾರ್ಗವೇ ನೀನಾದೆ..
ನಿನ್ನಿಂದಲೇ ನನ್ನ ಮನದಲ್ಲಿ ಹುಟ್ಟಿದ ಈ ಗಾದೆ...

ಪುಟವೊಂದನ್ನು ತಿರುವಿದೆ ಎಲ್ಲೆಲ್ಲೂ ಮಾತುಗಳ ಮುತ್ತು..
ವಾಕ್ಯಾನುಸಾರ ನುಡಿದಂತೆ ನಡೆದರೆ ಕೋಟಿ ಸಂಪತ್ತು...

ಪದಗಳಲ್ಲಿ ಅಡಗಿದೆ ಅದೆಂಥಾ ಅಗೋಚರ ಶಕ್ತಿ..
ಓದುಗರ ಮೈ ಮನದಲ್ಲಿ ಹರ್ಷೋದ್ವೇಗದ ಭಕ್ತಿ...

ಕಣ್ಣು ಕಂಪಿಸುವಂತಾ ನುಡಿಮುತ್ತುಗಳ ಅವಿನಾಭಾವ..
ಪ್ರಥಮ ಪುಟದಲ್ಲೆ ಆರಂಭ ಜೀವ ಜೀವದ ಅನುಭವ...

ಪುಸ್ತಕ ಮೂರಕ್ಷರದ ಪದ ಹೇಳಲು ಕಾತರ..
ಙ್ಞಾನದ ಪರೀದಿಗೆ ಆದಿ ಉಂಟು ಅಂತ್ಯ ಅಗೋಚರ...

--ನಿನ್ನ ಓದುಗ

No comments:

Post a Comment