ನಮ್ಮ ಬಿಳಿ ಬಯಲು.. (My area white field)
ಬೀಸು ಸರ್ ರಿಗೆ ಒಂದು ಓಲೆಯಂತೆ..
ಬೀಸು ಸರ್.. ಬಿಳಿ ಬಯಲು, ಬಿಳಿ ಬಟ ಬಯಲಾಗಿ ಉಳಿದಿಲ್ಲಾ ಬೀಸು ಸರ್.. ಇಲ್ಲಿ IT BT ಹುಡುಗ ಹುಡುಗಿಯರ ಕಲರವವಿದೆ.. ;)
ಕಣ್ಗವಚುವಂತಾ ಮಾಲ್ ಗಳಲ್ಲಿ ಬಾಲೆಯರ ಒಡನಾಟವಿದೆ.. :P
ನಮ್ಮ ಕೆಂಪು ಕುದುರೆಯಂತು, ಓ, ಓ, ಓಹೊಹೋ ಏನು ಓಟ ಅಂತೀರೀ, ಓಡಿದರು ನಿಂತರೂ
ನಿಮ್ಮನ್ನು ಅಲುಗಾಡಿಸುವುದಿಲ್ಲಾ.. ಹೊರಗಡೆ ಬಿಸಿಲೋ ಬಿಸಿ.. ನಮ್ಮ ಕುದುರೇ ಕೆಂಪು, ನಿಮ್ಮನ್ನು ಖಂಡಿತಾ ಮಾಡುವುದು ತಂಪು..
ಯಾರೋ ಹೇಳಿದರು ಬಿಳಿ ಬಯಲಲ್ಲಿ, ಬಿಳಿ ಹಣ ಹೆಚ್ಚಂತೆ..
ಮತ್ತೇ ಕುಡಿಯಲು ತಿನ್ನಲು ಇಲ್ಲೇನು ಬಾರ್ ಗಳು, ರೆಸ್ಟೊರೆಂಟ್ ಗಳಿಗೇನು ಕೊರತೆಯೇ.. ಕಾಂಚಾಣ ಇರುವ ಕಡೆ ಅಣಬೆಯಂತೆ ಅವೂ ತಲೆ ಎತ್ತುತ್ತವೆ.. ಮದಿರಾ ಪ್ರಿಯರ ಕಾಟ ಸ್ವಲ್ಪ ಹೆಚ್ಚು,ಆದರೂ ಮದಿರಾ ಪ್ರಿಯರು ಅಮಧುರವಾಗಿ ಕಾಣಿಸುವುದಿಲ್ಲ..
ಕೊನೇ ಪಕ್ಷ ಏನಿಲ್ಲವೆಂದರೂ ನಿಮಗೇ ಕಡಕ್ ಚಾಯ್ ಕುಡಿಸಿ ಖುಷಿ ಪಡಿಸುವುದಂತು ನನ್ನ
ಜವಾಬ್ದಾರಿ.. ಮತ್ತೆ ಯಾವಾಗ ನಿಮ್ಮ ಪಯಣ ಇತ್ತ, ಬಿಳಿ ಬಯಲಿನ ಕಡೆ ಇಷ್ಟು ಹೇಳಿದ ಮೇಲೆ.. :) :)